Labour Card Scholarship 2023 Apply Online: ರೂ 20000 ಸ್ಕಾಲರ್ಶಿಪ್ ಗಾಗಿ ಈಗಲೇ ಅರ್ಜಿ ಸಲ್ಲಿಸಿ

ವಿದ್ಯೆ ಪ್ರತಿಯೊಬ್ಬನ ಸ್ವತ್ತು. ಅದನ್ನು ಗಳಿಸಲು ಬಡತನ ಒಂದು ತಡೆ ಆಗಬಾರದು. ಈ ಉದ್ದೇಶದಿಂದ ರಾಜ್ಯ ಸರಕಾರ (Labour Card Scholarship 2023) ಈ ಮೂಲಕ ಶೈಕ್ಷಣಿಕ ಪ್ರೋತ್ಸಾಹಧನ ನೀಡುತ್ತಿದೆ. ಗುಣಮಟ್ಟದ ಶಿಕ್ಷಣ ಪಡೆಯಲು ಈ ಸಹಾಯಧನವನ್ನು ಪಡೆದು ನಿಮ್ಮ ಗುರಿಯನ್ನು ಸಾಧಿಸಿ ಎನ್ನುವುದೇ ನಮ್ಮ ಉದ್ದೇಶ.

ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್‌ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾರು ಅರ್ಹರು, ಅರ್ಜಿ ಸಲ್ಲಿಕೆ ವಿಧಾನ, ಎಷ್ಟು ಪ್ರೋತ್ಸಾಹ ಧನ ಸಹಾಯ ನೀಡಲಾಗುತ್ತದೆ ಎಂಬ ಇತ್ಯಾದಿ ವಿವರಗಳನ್ನು ಇಲ್ಲಿ ಒದಗಿಸಲಾಗಿದೆ. ನೀವು ಸಂಪೂರ್ಣವಾಗಿ ಓದಿ ಸರ್ಕಾರದ ಈ ಯೋಜನೆಯ ಸೌಲಭ್ಯ ಪಡೆಯಿರಿ.

ಕಟ್ಟಡ ಕಾರ್ಮಿಕರು ಸೇರಿದಂತೆ ಕಾರ್ಮಿಕರ ಕಾರ್ಡ್ ಹೊಂದಿರುವವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರ ಸಹಾಯಧನವನ್ನು ನೀಡುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಅಂದರೆ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅರ್ಜಿಯನ್ನು ಕರೆದಿದ್ದು, ಅರ್ಹ ಫಲಾನುಭವಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ವಿದ್ಯಾರ್ಥಿ ವೇತನ, ಉದ್ಯೋಗ ಸುದ್ದಿ ಸೇರಿದಂತೆ ಇತರ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಸೇರಿಕೊಳ್ಳಿ. ಈ ಸ್ಕಾಲರ್‌ಶಿಪ್‌ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ಕೆಳಗೆ ನೀಡಲಾಗಿದ್ದು, ಕೊನೆಯವರೆಗೆ ಓದಿರಿ. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.

ಇದನ್ನು ಓದಿ: Social Welfare Department Scholarship:ಸಮಾಜ ಕಲ್ಯಾಣ ಇಲಾಖೆಯಿಂದ ಸ್ಕಾಲರ್‌ಶಿಪ್‌ ಈಗಲೆ ಅರ್ಜಿ ಸಲ್ಲಿಸಿ

ಈ ಯೋಜನೆಯ ಮೂಲಕ ಪ್ರೌಢ ಶಾಲಾ ಮಕ್ಕಳಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ ಅಥವಾ ಇಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುವವರಿಗೂ ದೊರೆಯಲಿದೆ. ಆದರೆ ಕಾರ್ಮಿಕರ ತಿಂಗಳ ವೇತನ ರೂಪಾಯಿ 35,000 ಮೀರಿರಬಾರದು ಹಾಗೂ ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಅನುಕೂಲ ನೀಡಲಾಗುವುದು ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಲೇಬರ್ ಕಾರ್ಡ್ ಪ್ರೋತ್ಸಾಹಧನ ಪಡೆಯಲು ಬಯಸುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Labour Card Scholarship 2023 ಪಡೆಯಲು ಅರ್ಹತೆಗಳೇನು ?

ಪ್ರಮುಖವಾಗಿ ಸಂಘಟಿತ ಕಾರ್ಮಿಕರ ಮಂಡಳಿಯಲ್ಲಿ ಸದಸ್ಯರಾಗಿದ್ದು, ಮಂಡಳಿಗೆ ವಂತಿಗೆ ಪಾವತಿಸುತ್ತಿರುವವರ ಮಕ್ಕಳಿಗೆ ಈ ಸಹಾಯಧನ ದೊರೆಯಲಿದೆ. ಕಾರ್ಮಿಕರ ತಿಂಗಳ ವೇತನ ರೂಪಾಯಿ 35,000 ಮೀರಿರಬಾರದು. ಕುಟುಂಬದಲ್ಲಿ ಈ ಯೋಜನೆಯ ಮೂಲಕ ಈ ಮೊದಲು ಸಹಾಯಧನ ಪಡೆದಿರಬಾರದು. ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಯು ಶೇಕಡ 50ರಷ್ಟು ಅಂಕ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಯು 45ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು.

ಪ್ರೋತ್ಸಾಹಧನದ ಮೊತ್ತ

Labour Card Scholarship 2023 ಯೋಜನೆಯ ಮೂಲಕ ಪ್ರೌಢ ಶಾಲಾ ಮಕ್ಕಳಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ ಅಥವಾ ಇಂಜಿನಿಯರಿಂಗ್‌ ಮಾಡುವವರಿಗೂ ಸಹಾಯಧನ ದೊರೆಯಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

  • ಪ್ರೌಢಶಾಲೆಯ 8 ರಿಂದ 10ನೇ ತರಗತಿವರೆಗಿನ ಅಭ್ಯರ್ಥಿಗಳು 6,000 ಪ್ರೋತ್ಸಾಹ ಧನ
  • ಪಿಯುಸಿ ಡಿಪ್ಲೋಮಾ ಐಟಿಐ ಟಿಸಿಎಚ್ ಹಾಗೂ ಇತ್ಯಾದಿ ವಿದ್ಯಾರ್ಥಿಗಳಿಗೆ ರೂ 8,000 ಪ್ರೋತ್ಸಾಹ ಧನ
  • ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ರೂ 10,000 ಮೊತ್ತ ಪ್ರೋತ್ಸಾಹ ಧನ
  • ಸ್ನಾತಕೋತ್ತರ ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ರೂ 12,000 ಪ್ರೋತ್ಸಾಹ ಧನ
  • ಇಂಜಿನಿಯರಿಂಗ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರೂ 20,000 ಪ್ರೋತ್ಸಾಹ ಧನ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜನವರಿ 2024

ಇದನ್ನು ಓದಿ: Mangaluru District Court Recruitment 2023:10th, 12th ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ

Labour Card Scholarship 2023 ರ ಪ್ರಮುಖ ಲಿಂಕುಗಳು

ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಚಾನಲ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಚಾನಲ್ ಇಲ್ಲಿ ಕ್ಲಿಕ್ ಮಾಡಿ
Sharing Is Caring: