IRCON Recruitment 2023: ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಇಂದ ಹೊಸ ನೇಮಕಾತಿ (IRCON Recruitment 2023) ಅಧಿಸೂಚನೆ ಪ್ರಕಟವಾಗಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುವ ಮತ್ತು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 22 ನವೆಂಬರ್ 2023 ರ ಒಳಗೆ ಅಗತ್ಯ ದಾಖಲೆಗಳ ಸಮೇತ ಸಲ್ಲಿಸಲು ಕೋರಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಂದೆ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ನೋಟಿಫಿಕೇಶನ್ ಸಹ ಒದಗಿಸಲಾಗಿದ್ದು, ಸರಿಯಾಗಿ ಮತ್ತೊಮ್ಮೆ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.

ವಿದ್ಯಾರ್ಥಿ ವೇತನ, ಉದ್ಯೋಗ ಸುದ್ದಿ ಸೇರಿದಂತೆ ಇತರ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಸೇರಿಕೊಳ್ಳಿ. ಈ ಸ್ಕಾಲರ್‌ಶಿಪ್‌ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ಕೆಳಗೆ ನೀಡಲಾಗಿದ್ದು, ಕೊನೆಯವರೆಗೆ ಓದಿರಿ. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.

ಇದನ್ನು ಓದಿ: Mangaluru District Court Recruitment 2023:10th, 12th ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ

ಇಲಾಖೆ ಹೆಸರು ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್
ಹುದ್ದೆಗಳ ಹೆಸರು ಮ್ಯಾನೇಜರ್, ವರ್ಕ್ಸ್ ಇಂಜಿನಿಯರ್
ಒಟ್ಟು ಹುದ್ದೆಗಳು 23
ಉದ್ಯೋಗ ಸ್ಥಳ ಕರ್ನಾಟಕ – ರಾಜಸ್ಥಾನ – ಅಸ್ಸಾಂ – ಬಿಹಾರ
ಅರ್ಜಿ ಸಲಿಸಲು ಕೊನೆಯ ದಿನಾಂಕ22 ನವೆಂಬರ್ 2023

ಉದ್ಯೋಗ ಮಾಹಿತಿ

ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಖಾಲಿಯಿರುವ ಹುದ್ದೆಗಳು ಹಾಗೂ ಹುದ್ದೆಗಳ ಸಂಖ್ಯೆ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನ ಟೇಬಲ್ ನಲ್ಲಿ ನೀಡಲಾಗಿದೆ. ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬಹುದು.

ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ
JGM/ಎಲೆಕ್ಟ್ರಿಕಲ್3
DGM/ಎಲೆಕ್ಟ್ರಿಕಲ್6
ಮ್ಯಾನೇಜರ್/ಎಲೆಕ್ಟ್ರಿಕಲ್2
ಮ್ಯಾನೇಜರ್/OHE4
ಮ್ಯಾನೇಜರ್/ಎಸ್ & ಟಿ2
ವರ್ಕ್ಸ್ ಇಂಜಿನಿಯರ್/ಎಲೆಕ್ಟ್ರಿಕಲ್4
ಸೈಟ್ ಮೇಲ್ವಿಚಾರಕ/ಎಲೆಕ್ಟ್ರಿಕಲ್2

ವಿದ್ಯಾರ್ಹತೆ

IRCON Recruitment 2023 ಹೊರಡಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ ಹಾಗೂ ಇಂಜಿನಿಯರಿಂಗ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಇಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ವಯೋಮಿತಿ

IRCON Recruitment 2023 ರ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಎಂದಿನಂತೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವೇತನಶ್ರೇಣಿ

ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಹೊರಡಿಸಿರುವ ಅಧಿಸೂಚನೆ (IRCON Recruitment 2023)ಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ.25,000 ದಿಂದ ರೂ.80000 ವರೆಗೆ ವೇತನ ನೀಡಲಾಗುವುದು ಎಂದು ತಿಳಿಸಿದೆ. ಹುದ್ದೆವಾರು ಮಾಸಿಕ ವೇತನ ಪಟ್ಟಿ ಈ ಕೆಳಗಿನಂತಿದೆ.

JGM/ಎಲೆಕ್ಟ್ರಿಕಲ್ರೂ. 80,000/-
DGM/ಎಲೆಕ್ಟ್ರಿಕಲ್ರೂ. 70,000/-
ಮ್ಯಾನೇಜರ್/ಎಲೆಕ್ಟ್ರಿಕಲ್ರೂ. 60,000/-
ಮ್ಯಾನೇಜರ್/OHEರೂ. 60,000/-
ಮ್ಯಾನೇಜರ್/ಎಸ್ & ಟಿರೂ. 60,000/-
ವರ್ಕ್ಸ್ ಇಂಜಿನಿಯರ್/ಎಲೆಕ್ಟ್ರಿಕಲ್ರೂ. 36,000/-
ಸೈಟ್ ಮೇಲ್ವಿಚಾರಕ/ಎಲೆಕ್ಟ್ರಿಕಲ್ರೂ. 25,000/-

ಅರ್ಜಿ ಶುಲ್ಕ

ಇಂಡಿಯನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಕರೆದಿರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ

IRCON ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

IRCON Recruitment 2023 ರ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ?

  • ಮೊದಲಿಗೆ ಕೆಳಗೆ ನೀಡಲಾಗಿರುವ ಅಧಿಸೂಚನೆಯ ಲಿಂಕ್ ಕ್ಲಿಕ್ ಮಾಡಿ…ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಿ.
  • ಅರ್ಜಿ ನಮೂನೆಯ ಲಿಂಕನ್ನು ಕೆಳಗೆ ನೀಡಲಾಗಿದೆ. ಡೌನ್ಲೋಡ್ ಮಾಡಿಕೊಳ್ಳಿ.
  • ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
  • ನಂತರ ಅರ್ಜಿಯನ್ನು ಪ್ರಿಂಟ್ ಔಟ್ ತೆಗೆದುಕೊಂಡು, ಕರ್ನಾಟಕದವರು ಕೆಳಗಿನ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು

IRCON ದಕ್ಷಿಣ ಪ್ರಾದೇಶಿಕ ಕಚೇರಿ, B2-318, III
ಮಹಡಿ, ತುಂಗಭದ್ರಾ ಬ್ಲಾಕ್, ರಾಷ್ಟ್ರೀಯ ಕ್ರೀಡಾ
ಗ್ರಾಮ, ಕೋರಮಂಗಲ,
ಬೆಂಗಳೂರು-560047

IRCON Recruitment 2023 ರ ಪ್ರಮುಖ ದಿನಾಂಕಗಳು

ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 13 ಅಕ್ಟೋಬರ್ 2023
ಅರ್ಜಿ ಸಲಿಸಲು ಕೊನೆಯ ದಿನಾಂಕ – 22 ನವೆಂಬರ್ 2023

ಇದನ್ನು ಓದಿ: India Post Recruitment 2023: ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ

ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಫಾರ್ಮ್ ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ
Sharing Is Caring: