Karnataka Postal MMS Jobs: ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 27 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯು ಕರ್ನಾಟಕದಲ್ಲಿ (Karnataka Postal MMS Jobs) ಖಾಲಿಯಿರುವ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 14 ಮೇ 2024 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ಅಂಚೆ ಇಲಾಖೆಯಲ್ಲಿ ಸ್ಟಾಫ್ ಕಾರ್ ಡ್ರೈವರ್ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವವರು ಮತ್ತು 10 ನೇ ತರಗತಿ ಪೂರ್ಣಗೊಳಿಸಿ ಡ್ರೈವರ್ ಹುದ್ದೆಗೆ ಪ್ರಯತ್ನಿಸುತ್ತಿರುವವರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ.

ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಕೆಳಗೆ ನೀಡಲಾಗಿದ್ದು, ಕೊನೆಯ ವರೆಗೆ ಓದಿರಿ.

ವಿದ್ಯಾರ್ಥಿ ವೇತನ, ಉದ್ಯೋಗ ಸುದ್ದಿ ಸೇರಿದಂತೆ ಇತರ ಮಾಹಿತಿಗಾಗಿ  ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಸೇರಿಕೊಳ್ಳಿ. ಈ ಸ್ಕಾಲರ್‌ಶಿಪ್‌ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ಕೆಳಗೆ ನೀಡಲಾಗಿದ್ದು, ಕೊನೆಯವರೆಗೆ ಓದಿರಿ. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.

ಹುದ್ದೆ ನೀಡುತ್ತಿರುವ ಇಲಾಖೆ ಅಂಚೆ ಇಲಾಖೆ
ಹುದ್ದೆಯ ಹೆಸರುಸ್ಟಾಫ್ ಕಾರ್ ಡ್ರೈವರ್
ಹುದ್ದೆಗಳ ಸಂಖ್ಯೆ27
ಕೆಲಸದ ಸ್ಥಳಕರ್ನಾಟಕ

ವಿದ್ಯಾರ್ಹತೆ

ಅಂಚೆ ಇಲಾಖೆಯು ಅಧಿಸೂಚನೆ ಹೊರಡಿಸಿರುವ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು, ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ 10ನೇ ತರಗತಿಯನ್ನು ಉತ್ತೀರ್ಣ ಹೊಂದಿರಬೇಕು. ಅಲ್ಲದೇ ಚಾಲ್ತಿಯಲ್ಲಿರುವ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.

ವಯೋಮಿತಿ

ಪೋಸ್ಟ್ ಆಫೀಸ್ ನೇಮಕಾತಿ (Karnataka Postal MMS Jobs) ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 03 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ಅರ್ಜಿ ಶುಲ್ಕ

ಅಂಚೆ ಇಲಾಖೆಯ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂಪಾಯಿಗಳು ಮತ್ತು ಎಸ್ಸಿ/ಎಸ್ಟಿ/ಒಬಿಸಿ ಸೇರಿದಂತೆ ಮೀಸಲಾತಿ ವರ್ಗಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ

ಅಂಚೆ ಇಲಾಖೆಯ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

Karnataka Postal MMS Jobs ಗೆ ಅರ್ಜಿ ಸಲ್ಲಿಸುವುದು ಹೇಗೆ ?

ಅಂಚೆ ಇಲಾಖೆಯ ಈ ಹುದ್ದೆಗೆ (Karnataka Postal MMS Jobs) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕೆಳಗೆ ನೀಡಲಾಗಿರುವ ವೆಬ್ ಸೈಟ್ ಲಿಂಕ್ ಮೂಲಕ ಡೌನ್ ಲೋಡ್ ಮಾಡಿಕೊಂಡು, ಸ್ವಯಂ-ದೃಡೀಕೃತ ದಾಖಲೆಗಳನ್ನು ಸೇರಿಸಿ ಅರ್ಜಿಯನ್ನು ಮೇ 14, 2024 ರೊಳಗೆ ಮ್ಯಾನೇಜರ್, ಮೇಲ್ ಮೋಟಾರ್ ಸೇವೆ, ಬೆಂಗಳೂರು-560001 ಗೆ ಸ್ಪೀಡ್ ಪೋಸ್ಟ್/ರೆಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬಹುದಾಗಿದೆ.

ಇದನ್ನೂ ಓದಿರಿ: ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ!1,000 ಹುದ್ದೆಗಳಿಗೆ ಅರ್ಜಿ ಆಹ್ವಾನ! PUC ಪಾಸ್ ಆಗಿದ್ದರೆ ಇಲ್ಲಿದೆ ನೋಡಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 08/04/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14/5/2024

ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಚಾನೆಲ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಚಾನೆಲ್ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ಸಂಪೂರ್ಣವಾಗಿ ಮತ್ತೊಮ್ಮೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. (ಅಧಿಸೂಚನೆಯ ಲಿಂಕ್ ನೀಡಲಾಗಿದೆ) ಅವಶ್ಯಕ ದಾಖಲಾತಿಗಳೊಂದಿಗೆ ಸರಿಯಾಗಿ ಪರಿಶೀಲನೆ ಮಾಡಿ ಅರ್ಜಿ ನಮೂನೆಯನ್ನು ಸಲ್ಲಿಸಿ.
Sharing Is Caring: