ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ವಿವಿಧ ಕೋರ್ಸುಗಳನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ (Social Welfare Department Scholarship) ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ವಿವಿಧ ಕೋರ್ಸ್ ತೆಗೆದುಕೊಂಡು ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಇದೇ ಬರುವ 31 ಡಿಸೇಂಬರ್ 2023 ರ ಒಳಗೆ ಅರ್ಜಿಯನ್ನು ಸಲ್ಲಿಸುವಂತೆ ಕೇಳಿಕೊಂಡಿದೆ.
ಮೆಟ್ರಿಕ್ ನಂತರದ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ SC/ST ಸಮುದಾಯದ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ 31 ಡಿಸೇಂಬರ್ 2023 ಕೊನೆಯ ದಿನವಾಗಿದ್ದು, ಈ ಮೂಲಕ ಸಹಾಯಧನವನ್ನು ಪಡೆದು ಶಿಕ್ಷಣವನ್ನು ಮುಂದುವರೆಸಬಹುದಾಗಿದೆ.
ವಿದ್ಯಾರ್ಥಿ ವೇತನ, ಉದ್ಯೋಗ ಸುದ್ದಿ ಸೇರಿದಂತೆ ಇತರ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾನಲ್ ಸೇರಿಕೊಳ್ಳಿ. ಈ ಸ್ಕಾಲರ್ಶಿಪ್ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ಕೆಳಗೆ ನೀಡಲಾಗಿದ್ದು, ಕೊನೆಯವರೆಗೆ ಓದಿರಿ. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.
ಇದನ್ನೂ ಓದಿ: India Post Recruitment 2023: ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ
Social Welfare Department Scholarship ಮೊತ್ತವೆಷ್ಟು ಗೊತ್ತೇ ?
- ದ್ವಿತೀಯ ಪಿಯುಸಿ ಮತ್ತು ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ರೂ. 20,000/-
- ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ರೂ. 25,000/-
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ರೂ. 30,000/-
- ಅಗ್ರಿಕಲ್ಚರ್, ಇಂಜಿನಿಯರ್, ವೆಟರನರಿ, ಮೆಡಿಷನ್ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ರೂ. 35,000/-
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಮಾಹಿತಿಗಳು
Social Welfare Department Scholarship ಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ತಿಳಿಸಲಾಗಿರುವ ದಾಖಲೆಗಳನ್ನು ಸ್ಕಾನ್ ಮಾಡಿಟ್ಟುಕೊಳ್ಳಿ.
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಅರ್ಜಿ ಸಲ್ಲಿಸುವವರ ಹಿಂದಿನ ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿ
- ಆಧಾರ್ ಕಾರ್ಡ್ ಅಥವಾ ಸರ್ಕಾರಿ ಗುರುತಿನ ಚೀಟಿ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕುರಿತು ಪೂರಕ ದಾಖಲೆ
ಅರ್ಜಿ ಸಲ್ಲಿಸುವುದು ಹೇಗೆ?
- ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. (ಅಧಿಕೃತ ವೆಬ್ ಸೈಟ್ ಲಿಂಕ್ ಕೊನೆಯಲ್ಲಿ ನೀಡಲಾಗಿದೆ)
- ಮೆಟ್ರಿಕ್ ನಂತರ (ಪದವಿ/ಸ್ನಾತಕೋತ್ತರ ಪದವಿ) ಪ್ರೋತ್ಸಾಹಧನ (Social Welfare Department Scholarship) ಲಿಂಕನ್ನು ಕ್ಲಿಕ್ ಮಾಡಿ.
- ಈಗ ಇಲ್ಲಿ ಆನ್ ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿ ಕೇಳಲಾದ ವಿವರಗಳನ್ನು ನಮೂದಿಸಿ.
- ಮೇಲೆ ತಿಳಿಸಿದ ದಾಖಲೆಗಳನ್ನು ಸ್ಕಾನ್ ಮಾಡಿ ಸಲ್ಲಿಸಿ.
- ನಂತರ ಸಲ್ಲಿಸು (submit) ಮೇಲೆ ಕ್ಲಿಕ್ ಮಾಡಿ.
ಇಲ್ಲಿ ಕ್ಲಿಕ್ ಮಾಡಿ: Intelligence Bureau Recruitment 2023: ವಿವಿಧ 677 ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಹಾಕಿ
ಪ್ರಮುಖ ಲಿಂಕುಗಳು
ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಚಾನಲ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಚಾನಲ್ | ಇಲ್ಲಿ ಕ್ಲಿಕ್ ಮಾಡಿ |