ಕೇಂದ್ರೀಯ ವಿದ್ಯಾಲಯ ಸಂಘಟನಾ ಸಂಸ್ಥೆಯ (KVS Recruitment 2022) ವಿವಿಧ ಭೋದಕ ಮತ್ತು ಬೋಧಕೇತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಸಲುವಾಗಿ 13,404 ಪೋಸ್ಟ್ ಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅವುಗಳಲ್ಲಿ ಪಿಜಿಟಿ, ಟಿಜಿಟಿ, ಪ್ರಿನ್ಸಿಪಾಲರು, ಉಪ ಪ್ರಾಂಶುಪಾಲರು, ಸೆಕ್ಷನ್ ಆಫೀಸರ್, ಭಾಷಾಂತರಕಾರರು, ಹಣಕಾಸು ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕೇಂದ್ರೀಯ ವಿದ್ಯಾಲಯದ ಹುದ್ದೆಗಳಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಡಿಸೆಂಬರ್ 5 ರಿಂದಲೇ ಆರಂಭಿಸಲಾಗಿದೆ. ಈ ತಿಂಗಳ (ಡಿಸೆಂಬರ್) 26 ರ ವರೆಗೆ ಅವಕಾಶವಿದ್ದು, ಅರ್ಜಿ ಸಲ್ಲಿಸಲು ಅಗತ್ಯವಿರುವ ಸಂಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಲು ನಿಮ್ಮ ಉದ್ಯೋಗ ಸಾತಿ ವಿನಂತಿಸುತ್ತಿದೆ.
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ನೋಟಿಫಿಕೇಶನ್ ಲಿಂಕನ್ನು ಕ್ಲಿಕ್ ಮಾಡಿ, ಡೌನ್ಲೋಡ್ ಮಾಡಿಕೊಂಡು ವಿವರವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಲು ವಿನಂತಿಸುತ್ತೇವೆ.
ಹುದ್ದೆಯ ಮಾಹಿತಿ
ಪ್ರಾಂಶುಪಾಲರು | 239 |
ಉಪ ಪ್ರಾಂಶುಪಾಲರು | 203 |
ಪೋಸ್ಟ್ ಗ್ರಾಜುಯೇಟ್ ಟೀಚರ್ | 1409 |
ಟ್ರೈನ್ಡ್ ಗ್ರಾಜುಯೇಟ್ ಟೀಚರ್ | 3176 |
ಗ್ರಂಥಾಪಾಲಕರು | 355 |
ಪ್ರೈಮರಿ ಟೀಚರ್ | 6414 |
ಅಸಿಸ್ಟಂಟ್ ಕಮಿಷನರ್ | 52 |
ಪಿಆರ್‌ಟಿ | 303 |
ಹಣಕಾಸು ಅಧಿಕಾರಿ | 6 |
ಅಸಿಸ್ಟಂಟ್ ಇಂಜಿನಿಯರ್ | 2 |
ಅಸಿಸ್ಟಂಟ್ ಸೆಕ್ಷನ್ ಆಫೀಸರ್ | 156 |
ಹಿಂದಿ ಭಾಷಾಂತರಕಾರರು | 11 |
ಸೀನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ | 322 |
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ | 702 |
ಸ್ಟೆನೋಗ್ರಾಫರ್ ಗ್ರೇಡ್-2 | 54 |
ವಿದ್ಯಾರ್ಹತೆ
ಕೇಂದ್ರೀಯ ವಿದ್ಯಾಲಯದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಪದವಿ, ಪಿಜಿ, ಅಥವಾ ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯ / ಸಂಸ್ಥೆಯಿಂದ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವುದು ಅವಶ್ಯ.
ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ವಿವಿಧ ವಿದ್ಯಾರ್ಹತೆ ಮತ್ತು ಅನುಭವದ ಅವಶ್ಯಕತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ನೋಟಿಫಿಕೇಶನ್/ವೆಬ್ ಸೈಟ್ ಚೆಕ್ ಮಾಡಿ.
ವಯೋಮಿತಿ
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) – 40 ವರ್ಷ, ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) – 35 ವರ್ಷ, ಪ್ರಾಥಮಿಕ ಶಿಕ್ಷಕರು (ಪಿಆರ್‌ಟಿ) – 30 ವರ್ಷ, ಪ್ರಾಂಶುಪಾಲರು – 50 ವರ್ಷ, ಉಪ-ಪ್ರಾಂಶುಪಾಲರು – 45 ವರ್ಷ. ಇನ್ನು ಎಸ್ಸಿ, ಎಸ್ಟಿ, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರಕಾರಿ ನಿಯಮಾವಳಿಗಳ ಪ್ರಕಾರ ಸಡಿಲಿಕೆಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ
ಕೇಂದ್ರೀಯ ವಿದ್ಯಾಲಯ ಸಂಘಟನಾ ಸಂಸ್ಥೆಯು ಬೋಧಕ ಮತ್ತು ಬೋಧಕೇತರ ವಿಭಾಗಗಳಲ್ಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಶುಲ್ಕವನ್ನು ಮಾವತಿಸುವ ಅವಶ್ಯಕತೆ ಇರುವುದಿಲ್ಲ.
ಆಯ್ಕೆಯ ವಿಧಾನ
ಕೇಂದ್ರೀಯ ವಿದ್ಯಾಲಯದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರ ಸಂದರ್ಶನ/ಕಂಪ್ಯೂಟರ್ ಆಧಾರಿತ ಪರೀಕ್ಷೆ ಸಂದರ್ಶನ ಏರ್ಪಡಿಸಲಾಗುವುದು.
ವೇತನ ಶ್ರೇಣಿ
ಕೇಂದ್ರೀಯ ವಿದ್ಯಾಲಯದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 – 42,000/- ವರೆಗೆ ವೇತನ ನೀಡಲಾಗುವುದು.
ಇದನ್ನೂ ಓದಿರಿ: Indian Navy Recruitment 2022: 10th, PUC ಪಾಸಾಗಿದ್ರೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗ
ಕೇಂದ್ರೀಯ ವಿದ್ಯಾಲಯದ (KVS Recruitment 2022) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?
- ನೇರವಾಗಿ ಕೇಂದ್ರೀಯ ವಿದ್ಯಾಲಯ ಸಂಘಟನೆಯ ವೆಬ್ ಸೈಟ್ https://kvsangathan.nic.in/ ಗೆ ಭೇಟಿ ನೀಡಿ.
- ಅಲ್ಲಿ Announcements ವಿಭಾಗದಲ್ಲಿ ನೀವು ಸಲ್ಲಿಸಲು ಬಯಸುವ ಹುದ್ದೆಯನ್ನು ಆಯ್ದುಕೊಂಡು ಕ್ಲಿಕ್ ಮಾಡಿ.
- ಮುಂದಿನ ವೆಬ್ ಪೇಜಿನಲ್ಲಿ Registration ಮಾಡಿಕೊಳ್ಳಿ. ಮೊದಲೇ ರೆಜಿಸ್ಟರ್ ಆಗಿದ್ದರೆ ಮುಂದುವರೆಯಿರಿ.
- ಮುಖ್ಯವಾಗಿ ನೀಡಲಾಗಿರುವ Notification ಓದಿಕೊಳ್ಳಿ.
- ಅಗತ್ಯವಿರುವ ಮಾಹಿತಿ ಮತ್ತು ದಾಖಲಾತಿಗಳನ್ನು ಸರಿಯಾಗಿ ಪೂರೈಕೆ ಮಾಡಿರುವಿರಿ ಮತ್ತೊಮ್ಮೆ ಚೆಕ್ ಮಾಡಿಕೊಳ್ಳಿ.
- ಎಲ್ಲ ಮಾಹಿತಿಗಳು ಪೂರ್ಣವಾಗಿವೆ ಎಂದು ಖಚಿತಪಡಿಸಿಕೊಂಡ ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 26/12/2022
ಪ್ರಮುಖ ಲಿಂಕುಗಳು
ಅಧಿಕೃತ ನೋಟಿಫಿಕೇಶನ್ ಓದಿ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ನೋಟಿಫಿಕೇಶನ್ ಲಿಂಕ್ : Vacant Position
ವೆಬಸೈಟ್ : kvsangathan.nic.in