ಮಹಾರಾಷ್ಟ್ರ ಬ್ಯಾಂಕಿನಲ್ಲಿ ಖಾಲಿಯಿರುವ ಹುದ್ದೆ (Bank of Maharashtra Recruitment 2022) ಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ (Banking Jobs) ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡುವ ಆಸೆಯನ್ನು ಹೊಂದಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 314 ಅಪ್ರೆಂಟಿಸ್ ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಗೆ ಅಧಿಸೂಚನೆ ಕರೆಯಲಾಗಿದೆ. ಆಸಕ್ತರು ಡಿಸೆಂಬರ್ 23, 2022 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಯ ಮಾಹಿತಿ
Bank of Maharashtra Recruitment 2022 ಅಧಿಸೂಚನೆಯ ಪ್ರಕಾರ 314 ಹುದ್ದೆಗಳು ಖಾಲಿಯಿದ್ದು, ದೇಶದ 14 ರಾಜ್ಯಗಳಲ್ಲಿನ ತನ್ನ ಬ್ರಾಂಚ್ ಗಳಲ್ಲಿ ಖಾಲಿಯಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಆ ರಾಜ್ಯವಾರು ಅವಶ್ಯಕ ಅಭ್ಯರ್ಥಿಗಳ ಮಾಹಿತಿಯು ಈ ಕೆಳಗಿನಂತಿದೆ.
ಮಹಾರಾಷ್ಟ್ರ | 207 |
ಮಧ್ಯ ಪ್ರದೇಶ | 22 |
ಉತ್ತರ ಪ್ರದೇಶ | 20 |
ಆಂಧ್ರ ಪ್ರದೇಶ | 10 |
ತಮಿಳುನಾಡು | 10 |
ದೆಹಲಿ | 10 |
ಕರ್ನಾಟಕ | 8 |
ಗುಜರಾತ್ | 6 |
ಪಶ್ಚಿಮ ಬಂಗಾಳ | 5 |
ಪಂಜಾಬ್ | 5 |
ಗೋವಾ | 4 |
ರಾಜಸ್ಥಾನ | 3 |
ಛತ್ತೀಸ್ಗಢ | 2 |
ಚಂಡೀಗರ್ | 2 |
ವಿದ್ಯಾರ್ಹತೆ
ಮಹಾರಾಷ್ಟ್ರ ಬ್ಯಾಂಕಿನಲ್ಲಿ (Banking Jobs) ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯ ಪ್ರಕಾರ, ಯಾವುದೇ ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯಗಳಿಂದ 10 ನೇ ತರಗತಿ, 12 ನೇ ತರಗತಿ, ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
Bank of Maharashtra Recruitment 2022 ರ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಮಾರ್ಚ್ 31, 2022 ಕ್ಕೆ ಕನಿಷ್ಠ 20 ವರ್ಷಗಳು ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 28 ವರ್ಷಗಳ ಒಳಗಿರಬೇಕು ಎಂದು ಹೇಳಲಾಗಿದೆ.
ಇನ್ನು ಪಿಡ್ಲ್ಯೂಡಿ (UR/EWS) 10 ವರ್ಷ, ಪಿಡ್ಲ್ಯೂಡಿ (OBC) 13 ವರ್ಷ, ಪಿಡ್ಲ್ಯೂಡಿ (SC/ST) 15 ವರ್ಷ, ಎಸ್ಸಿ/ಎಸ್ಟಿ 5 ವರ್ಷ, ಒಬಿಸಿ(NCL) ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ
ಮಹಾರಾಷ್ಟ್ರ ಬ್ಯಾಂಕಿನಲ್ಲಿ (Banking Jobs) ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಅರ್ಜಿಶುಲ್ಕ ಇರುತ್ತದೆ.
ಪಿಡ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಯ ಶುಲ್ಕ ಇರುವುದಿಲ್ಲ. ಇನ್ನು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿಯ ಶುಲ್ಕವನ್ನು 100 ರೂ. ನಿಗದಿ ಮಾಡಲಾಗಿದೆ. ಸಾಮಾನ್ಯ/ಆರ್ಥಿಕವಾಗಿ ಹಿಂದುಳಿದ/ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 150 ರೂಪಾಯಿಗಳನ್ನು ಆನ್ಲೈನ್ ಮೂಲಕ ಪಾವತಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆಯ ವಿಧಾನ
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಮತ್ತು ಸಂದರ್ಶದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿರಿ: Union Bank Recruitment 2022: ಯೂನಿಯನ್ ಬ್ಯಾಂಕ್ನಲ್ಲಿ 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವೇತನ
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿರುವ ಹುದ್ದೆಗಳಿಗೆ ಆಯ್ಕೆಯಾದ ಸದಸ್ಯರಿಗೆ ಒಂದು ವರ್ಷದ ಅವಧಿಯವರೆಗೆ ಪ್ರತಿ ಮಾಸಿಕ ರೂ. 9000 ಸ್ಟೈಫಂಡ್ ನೀಡಲಾಗುತ್ತದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?
- Bank of Maharashtra Recruitment 2022 ರ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿರಿ. ಹುದ್ದೆಗೆ ಅರ್ಜಿ ಸಲ್ಲಿಸಲು ನೀಡಲಾದ ಮಾನದಂಡಗಳನ್ನು ನೀವು ಹೊಂದಿರುವಿರೆ ಎಂದು ಪರಿಶೀಲಿಸಿಕೊಳ್ಳಿ.
- ನಂತರ ಅಲ್ಲಿ ಕೇಳಲಾದ ಸ್ವವಿವರ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಕೆಲಸದ ಅನುಭವವಿದ್ದರೆ ದಾಖಲೆಗಳು ಮತ್ತು ಇತರ ಅಗತ್ಯ ದಾಖಲಾತಿಗಳನ್ನು ಪಿಡಿಎಫ್ ವಿಧಾನದಲ್ಲಿ ಸಿದ್ಧಪಡಿಸಿಕೊಳ್ಳಿ.
- ನಂತರ ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಬ್ಯಾಂಕಿನ ವೆಬ್ ಸೈಟ್ ಗೆ ಭೇಟಿ ನೀಡಿ.
- New Registration ಮೇಲೆ ಕ್ಲಿಕ್ ಮಾಡಿ, ರೆಜಿಸ್ಟರ್ ಆಗಿರಿ. ನಂತರ ಆನ್ ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
- ನೀವು ನೀಡಿರುವ ಎಲ್ಲ ಮಾಹಿತಿಗಳು ಪೂರ್ಣ ಮತ್ತು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.
- ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಕಾಪಿ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 23/12/2022
ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ ಓದಿರಿ: ಕ್ಲಿಕ್ ಮಾಡಿ
ನೇರವಾಗಿ ಅರ್ಜಿಯನ್ನು ಸಲ್ಲಿಸಿ: ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್: ಕ್ಲಿಕ್ ಮಾಡಿ