Pragati Scholarship: ಸರ್ಕಾರ ನೀಡಲಿದೆ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ 50 ಸಾವಿರ

ಕೇಂದ್ರ ಸರ್ಕಾರ ನೀಡುವ ಪ್ರಗತಿ ಸ್ಕಾಲರ್ ಶಿಪ್ (Pragati Scholarship)ಗೆ ಅರ್ಜಿಯನ್ನು ಆಹ್ವಾನಿಸಿದ್ದು, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಯನಿಯರು ಅರ್ಜಿಯನ್ನು ಸಲ್ಲಿಸಬಹುದು. 2022-23 ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಡಿಸೆಂಬರ್ 31 ಕೊನೆಯ ದಿನವಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಯಾದ AICTE ಪ್ರತಿ ವರ್ಷ ಪ್ರಗತಿ ಸ್ಕಾಲರ್‌ಶಿಪ್‌ ಯೋಜನೆಯಡಿ, ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಯನಿಯರಿಗೆ ರೂ.50,000/- ವಿದ್ಯಾರ್ಥಿವೇತನವನ್ನು ನೀಡುತ್ತದೆ. ಮಹಿಳೆಯರಿಗೆ ತಾಂತ್ರಿಕ ಶಿಕ್ಷಣ ನೀಡುವ ಮೂಲಕ ಮಹಿಳೆಯರ ಸಬಲೀಕರಣ ಮಾಡುವುದು ಮುಖ್ಯ ಉದ್ದೇಶವಾಗಿದೆ.

ಪ್ರತಿವರ್ಷ ಈ ಸ್ಕಾಲರ್ ಶಿಪ್ ಅಡಿಯಲ್ಲಿ ನಾಲ್ಕು ಸಾವಿರ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದರಲ್ಲಿ ತಲಾ ಎರಡು ಸಾವಿರ ಡಿಪ್ಲೊಮಾ ಮತ್ತು ಎರಡು ಸಾವಿರ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವವರಿಗೆ ನೆರವು ನೀಡಲಾಗುತ್ತದೆ.

ಸ್ಕಾಲರ್ ಶಿಪ್ (Pragati Scholarship) ಪಡೆಯಲು ಅರ್ಹತೆಗಳೇನು?

  • ಅರ್ಜಿಯನ್ನು ಸಲ್ಲಿಸಬಯಸುವ ಅಭ್ಯರ್ಥಿಗಳು AICTE ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರಬೇಕು.
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತಲೂ ಕಡಿಮೆ ಇರಬೇಕು. ಅಲ್ಲದೇ ರಾಜ್ಯ ಸರಕಾರ ನೀಡಲಾಗುವ ಆದಾಯ ಪ್ರಮಾಣಪತ್ರ ಲಗತ್ತಿಸುವುದು ಕಡ್ಡಾಯ.
  • ಪ್ರತಿ ಕುಟುಂಬದ ಗರಿಷ್ಟ ಎರಡು ಹೆಣ್ಣುಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿರಿ: SJVN Recruitment 2022: ಸತ್ಲುಜ್ ಜಲ ವಿದ್ಯುತ್ ನಿಗಮದಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಥಿ ವೇತನದ ಮೊತ್ತ

ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ 50,000/- ರೂ. ಸಹಾಯಧನ ನೀಡಲಾಗುತ್ತದೆ. ಆಯ್ಕೆಯಾದ ಹೆಣ್ಣು ಮಕ್ಕಳಿಗೆ ಕಾಲೇಜು ಶುಲ್ಕ ಪಾವತಿಸಲು ರೂ. 30,000/- ನೀಡಲಾಗುತ್ತದೆ. ಅಲ್ಲದೇ ಪುಸ್ತಕ, ಸಲಕರಣೆ, ಸ್ಟೇಷನರಿ ಖರೀದಿಗೆ ಪ್ರತಿವರ್ಷ ಹತ್ತು ತಿಂಗಳಿಗೆ 2000/- ಸಾವಿರ ನೀಡಲಾಗುತ್ತದೆ.

ವಿದ್ಯಾರ್ಥಿನಿ ಜಾಬ್ ಕಾಲೇಜು ಶುಲ್ಕದಲ್ಲಿ ರಿಯಾಯತಿಯನ್ನು ಪಡೆದರೆ ರೂ.30,000/- ಅನ್ನು ಇತರೆ ಉದ್ದೇಶಗಳಿಗಾಗಿ, ಅಂದರೆ ಹಾಸ್ಟೆಲ್ ಶುಲ್ಕ, ಸಾರಿಗೆ ವೆಚ್ಚ, ಇತರೆ ಉದ್ದೇಶಗಳಿಗಾಗಿ ನೀಡಲಾಗುತ್ತದೆ.

ಪ್ರಗತಿ ಸ್ಕಾಲರ್ ಶಿಪ್ (Pragati Scholarship) ಯೋಜನೆಯಡಿಯಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಮೀಸಲಾತಿ ನೀಡಲಾಗುತ್ತದೆ. ಈ ಮೀಸಲಾತಿಯ ಪ್ರಕಾರ ಎಸ್ಸಿ ಅಭ್ಯರ್ಥಿಗಳಿಗೆ ಶೇಕಡಾ 15, ಎಸ್ಟಿ ಸಮುದಾಯದ ವಿದ್ಯಾರ್ಥಿನಿಯರಿಗೆ ಶೇಕಡಾ 7.5 ಮೀಸಲಾತಿ ಒದಗಿಸಲಾಗುತ್ತದೆ. ಈ ವರ್ಗಗಳಿಗೆ ಮಾತ್ರವಲ್ಲದೆ ಒಬಿಸಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರಿಗೆ ಶೇಕಡಾ 27 ರಷ್ಟು ಮೀಸಲಾತಿಯನ್ನು ಒದಗಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • 10 ನೇ ತರಗತಿ ಮತ್ತು 12 ನೇ ತರಗತಿಯ ಅಂಕಪಟ್ಟಿ.
  • ಆದಾಯ ಪ್ರಮಾಣಪತ್ರ.
  • ಜಾತಿ ಪ್ರಮಾಣ ಪತ್ರ.
  • ತಾಂತ್ರಿಕ ಶಿಕ್ಷಣ ಅಥವಾ ಡಿಪ್ಲೊಮಾ ತರಗತಿಗಳಿಗೆ ಪ್ರವೇಶ ಪಡೆದ ಪ್ರವೇಶಾತಿ ಪತ್ರ.
  • ಸಂಸ್ಥೆಯ ನಿರ್ದೇಶಕರು/ಪ್ರಾಂಶುಪಾಲರಿಂದ ಪ್ರಮಾಣಪತ್ರ.
  • ನೀವು ಅಧ್ಯಯನ ಮಾಡುತ್ತಿರುವ ಸಂಸ್ಥೆ/ಕಾಲೇಜಿನ ಬೋಧನಾ ಶುಲ್ಕ ಪಾವತಿಸಿದ ರಸೀದಿ.
  • ಒದಗಿಸಲಾದ ದಾಖಲಾತಿಗಳ ನಿಖರತೆಯನ್ನು ದೃಡೀಕರಿಸುವ ಪ್ರಮಾಣ ಪತ್ರ
  • ಅರ್ಜಿದಾರರ ಭಾವಚಿತ್ರ, ಆಧಾರ್ ಕಾರ್ಡ್
  • ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್ ಫೋಟೋ ಪ್ರತಿ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?

  • ಸರಕಾರದ ವಿದ್ಯಾರ್ಥಿ ವೇತನ ಪೋರ್ಟಲ್ scholarships.gov.in ವೆಬ್ ಪೋರ್ಟಲ್ ಗೆ ಭೇಟಿ ನೀಡಿ.
  • Applicant Corner ವಿಭಾಗದಲ್ಲಿರುವ New Registration ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀಡಲಾಗಿರುವ ಗೈಡ್ ಲೈನ್ ಗಳನ್ನು ಸರಿಯಾಗಿ ಓದಿಕೊಳ್ಳಿ.
  • ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಪೂರೈಸಿ ನಿಮ್ಮ ರಿಜಿಸ್ಟ್ರೇಷನ್ ಪೂರ್ಣಗೊಳಿಸಿ.
  • ನಂತರ login ಮಾಹಿತಿಗಳನ್ನು ಪಡೆದುಕೊಳ್ಳುತ್ತೀರಿ. ನಂತರ ಆ ಮಾಹಿತಿಯೊಂದಿಗೆ login ಆಗಿರಿ.
  • AICTE ಪ್ರಗತಿ ಸ್ಕಾಲರ್‌ ಶಿಪ್ 2022 ಗಾಗಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ತೆರೆದ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ಮಾಹಿತಿಗಳನ್ನು ಪೂರೈಸಿರಿ.
  • ನಿಮ್ಮ ದಾಖಲೆಗಳನ್ನು ಅಲ್ಲಿ ನೀಡಲಾಗಿರುವ ಫೈಲ್ ಮತ್ತು ಸೈಜ್ ಮಾದರಿಯಲ್ಲಿ ಪೂರೈಸಿರಿ.
  • ಮತ್ತೊಮ್ಮೆ ಸರಿಯಾಗಿ ಮಾಹಿತಿಗಳನ್ನು ಪೂರೈಸಿರುವಿರೇ ಎಂದು ಪರಿಶೀಲಿಸಿಕೊಳ್ಳಿ.
  • ನಂತರ submit ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಓದುಗರಿಂದ ಕೇಳಲಾಗುವ ಪ್ರಶ್ನೆಗಳು

  1. ಪ್ರಗತಿ ವಿದ್ಯಾರ್ಥಿ ವೇತನ(Pragati Scholarship)ಕ್ಕೆ ಯಾರು ಅರ್ಹರು?

    AICTE ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಹರಾಗಿದ್ದಾರೆ. ಅಲ್ಲದೇ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆಯಿರಬೇಕು ಎಂಬ ನಿಯಮವಿದೆ.

  2. ಪ್ರಗತಿ ವಿದ್ಯಾರ್ಥಿ ವೇತನ(Pragati Scholarship)ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ?

    ಮಹಿಳೆಯರಿಗೆ ತಾಂತ್ರಿಕ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ಪ್ರಗತಿ ವಿದ್ಯಾರ್ಥಿವೇತನ 2022-23 ಕ್ಕೆ ಅರ್ಜಿಯನ್ನು ಸಲ್ಲಿಸಲು 30 ಡಿಸೆಂಬರ್ 2022 ಕೊನೆಯ ದಿನವಾಗಿದೆ.

  3. ನಾನು ಪ್ರಗತಿ ಸ್ಕಾಲರ್ ಶಿಪ್ ಯೋಜನೆಯಿಂದ ಎಷ್ಟು ವಿದ್ಯಾರ್ಥಿವೇತನ ಪಡೆಯಬಹುದು ?

    ಪ್ರಗತಿ ವಿದ್ಯಾರ್ಥಿ ವೇತನದ ಮೂಲಕ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಕನಿಷ್ಠ 30,000/-ದಿಂದ ಗರಿಷ್ಟ 50,000/- ಪಡೆದುಕೊಳ್ಳಲು ಅವಕಾಶವಿದೆ.

  4. ಪ್ರಗತಿ ವಿದ್ಯಾರ್ಥಿ ವೇತನವನ್ನು ವಾರ್ಷಿಕ ಎಷ್ಟು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ ?

    ಪ್ರಗತಿ ವಿದ್ಯಾರ್ಥಿವೇತನವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಜಾರಿಗೊಳಿಸಿದ ಸರ್ಕಾರಿ ವಿದ್ಯಾರ್ಥಿವೇತನ ಯೋಜನೆಯಾಗಿದೆ. ಈ ಸ್ಕಾಲರ್‌ ಶಿಪ್ ಯೋಜನೆಯಡಿಯಲ್ಲಿ, ತಾಂತ್ರಿಕ ಶಿಕ್ಷಣವನ್ನು ಪಡೆಯಲು ಬಯಸಿರುವ, ವಾರ್ಷಿಕ ಒಟ್ಟು 5000 ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಗುತ್ತದೆ.

  5. ಪ್ರಗತಿ ವಿದ್ಯಾರ್ಥಿ ವೇತನ 2022-23 ಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

    ವೆಬ್ ಪೋರ್ಟಲ್ scholarships.gov.in ಗೆ ಭೇಟಿ ನೀಡಿ. ರೆಜಿಸ್ಟರ್ ಮಾಡಿಕೊಂಡು login ಆಗಿ. ಆ ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ಮಾಹಿತಿಗಳನ್ನು ಪೂರೈಸಿ. ದಾಖಲೆ ಪತ್ರಗಳನ್ನು Upload ಮಾಡಿ, ನಿಮ್ಮ ಅರ್ಜಿಯನ್ನು Submit ಮಾಡಿರಿ.

Sharing Is Caring: