AAI Recruitment 2023: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(Airports Authority of India)ದಲ್ಲಿ 596 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಸರ್ಕಾರಿ ಹುದ್ದೆ(Government Job) ಅರಸುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಬಿ. ಇ. ಅಥವಾ ಬಿ. ಟೆಕ್ ಮಾಡಿರುವ ಮತ್ತು ಉದ್ಯೋಗಕ್ಕಾಗಿ ಅರಸುತ್ತಿರುವವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತರು ಜನವರಿ 21, 2023 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯಲ್ಲಿ ಕೋರಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಹತ್ವದ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಯ ಮಾಹಿತಿ

ಜೂನಿಯರ್ ಎಕ್ಸಿಕ್ಯೂಟಿವ್ (ಸಿವಿಲ್)62
ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್)84
ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್​)440
ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್)10

ವಿದ್ಯಾರ್ಹತೆ

ಜೂನಿಯರ್ ಎಕ್ಸಿಕ್ಯೂಟಿವ್ (ಸಿವಿಲ್) ಹುದ್ದೆಗೆ – ಸಿವಿಲ್ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದಿರುವುದು ಅವಶ್ಯವಾಗಿದೆ.

ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್) ಹುದ್ದೆಗೆ – ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದಿರುವುದು ಅವಶ್ಯವಾಗಿದೆ.

ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್​) ಹುದ್ದೆಗೆ – ECE ನಲ್ಲಿ ಪದವಿ ಪಡೆದಿರುವುದು ಅವಶ್ಯವಾಗಿದೆ.

ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್) ಹುದ್ದೆಗೆ – ಆರ್ಕಿಟೆಕ್ಚರ್​​​ನಲ್ಲಿ & ಪ್ಲ್ಯಾನಿಂಗ್​ನಲ್ಲಿ ಪದವಿ ಪಡೆದಿರುವುದು ಅವಶ್ಯವಾಗಿದೆ.

ವಯೋಮಿತಿ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯ ಪ್ರಕಾರ ಜನವರಿ 21, 2023 ಕ್ಕೆ ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಪಿಡ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆಯನ್ನು ಅಧಿಸೂಚನೆಯಲ್ಲಿ ಒದಗಿಸಲಾಗಿದೆ.

ಅರ್ಜಿ ಶುಲ್ಕ

AAI Recruitment 2023 ರ ಪ್ರಕಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಎಸ್ಸಿ/ಎಸ್ಟಿ, ಪಿಡ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕಗಳು ಇರುವುದಿಲ್ಲ. ಇನ್ನು ಉಳಿದ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕ 300 ರೂಪಾಯಿಗಳನ್ನು ಆನ್ ಲೈನ್ ಮೂಲಕ ಪಾವತಿಸಬೇಕಾಗುತ್ತದೆ.

ಆಯ್ಕೆಯ ವಿಧಾನ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆ (AAI Recruitment 2023)ಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ಗೇಟ್​ ಸ್ಕೋರ್ ವಿಧಾನದ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ನಂತರ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ನೇರ ಸಂದರ್ಶನ ಮಾಡಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ ಶ್ರೇಣಿ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳಿಗೆ ಆಯ್ಕೆಯಾದ ಸದಸ್ಯರಿಗೆ AAI ನಿಯಮಾವಳಿಯ ಪ್ರಕಾರ ಮಾಸಿಕ 40 ಸಾವಿರ ರೂಪಾಯಿಗಳಿಂದ 1,40,000 ರೂಪಾಯಿಗಳ ವರೆಗೆ ವೇತನ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗೆ ನೀಡಲಾಗಿರುವ ಅಧಿಸೂಚನೆಯನ್ನು ಓದಿರಿ.

ಇದನ್ನೂ ಓದಿರಿ: IISc Recruitment 2022: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

  • AAI Recruitment 2023 ರ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿರಿ. ಹುದ್ದೆಗೆ ಅರ್ಜಿ ಸಲ್ಲಿಸಲು ನೀಡಲಾದ ಮಾನದಂಡಗಳನ್ನು ನೀವು ಹೊಂದಿರುವಿರೆ ಎಂದು ಪರಿಶೀಲಿಸಿಕೊಳ್ಳಿ.
  • ನಂತರ ಅಲ್ಲಿ ಕೇಳಲಾದ ಸ್ವವಿವರ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಕೆಲಸದ ಅನುಭವವಿದ್ದರೆ ದಾಖಲೆಗಳು ಮತ್ತು ಇತರ ಅಗತ್ಯ ದಾಖಲಾತಿಗಳನ್ನು ಪಿಡಿಎಫ್ ವಿಧಾನದಲ್ಲಿ ಸಿದ್ಧಪಡಿಸಿಕೊಳ್ಳಿ.
  • ನಂತರ ನೇರವಾಗಿ ಇಲಾಖೆಯ ವೆಬ್ ಸೈಟ್ www.aai.aero ಗೆ ಭೇಟಿ ನೀಡಿ.
  • ಆನ್ ಲೈನ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಪೂರೈಸಿ, ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.
  • ನಂತರ ನಿಮ್ಮ ವರ್ಗಕ್ಕೆ ಸೂಚಿತವಾದ ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಕಾಪಿ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 21/01/2023

ಪ್ರಮುಖ ಲಿಂಕುಗಳು

ಅಧಿಕೃತ ನೋಟಿಫಿಕೇಶನ್ ಓದಿ: ಇಲ್ಲಿ ಕ್ಲಿಕ್ ಮಾಡಿ

ನೇರವಾಗಿ ಅರ್ಜಿ ಸಲ್ಲಿಸಿ: ಕ್ಲಿಕ್ ಮಾಡಿ

ಅಧಿಕೃತ ವೆಬ್ ಸೈಟ್: ಕ್ಲಿಕ್ ಮಾಡಿ

Sharing Is Caring: